To Join Mission Narendra Modi For PM, Please give a miss call to - 080 - 67166886

ನಮೋ ಬ್ರಿಗೇಡ್ ಅಧಿಕೃತ ಉದ್ಘಾಟನೆ

image description

ಬೆಂಗಳೂರು:೧೪-೦೭-೨೦೧೩: ಪ್ರಪಂಚದ ಯಾವುದೇ ಮೂಲೆಯಲ್ಲಾದರೂ ಇಂತಹ ವ್ಯಕ್ತಿಯೇ ನಮ್ಮ ಪ್ರಧಾನಿ ಆಗಬೇಕು, ಆತನನ್ನೇ ಪ್ರಧಾನಿ ಮಾಡಲು ನಾವು ಸಂಘಟಿತರಾಗಿ ಕೆಲಸ ಮಾಡಬೇಕು ಎಂದು ಯಾವುದೇ ರಾಜಕೀಯ ಪಕ್ಷದ ಅಂಕುಶಕ್ಕೊಳಪಡದೇ ಕೆಲವೇ ಸಮಾನ ಮನಸ್ಕರ ತಂಡವೊಂದು ಸಂಘಟಿತವಾಗಲು ಸಾಧ್ಯವೇ? ಇದನ್ನು ನಿಜವಾಗಿಸಿದ ಘಟನೆ ಇಂದು ಜಯನಗರದ ರಾಷ್ಟ್ರೋತ್ಥಾನ ಪರಿಷತ್ತಿನ “ಅಜಿತ ಸ್ಮೃತಿ” ಕಟ್ಟಡದಲ್ಲಿ ನಡೆಯಿತು. ಒಂದು ಅಭೂತಪೂರ್ವ ಕಾರ್ಯಕ್ರಮ ಅದು. ಭಾರತದ ಭವಿಷ್ಯದ ಪ್ರಧಾನಿ ಎಂದೇ ಬಿಂಬಿತವಾಗಿರುವ ಅಭಿವೃದ್ಧಿಯ ಹರಿಕಾರ ಅಪ್ರತಿಮ ನಾಯಕ ನರೇಂದ್ರ ಮೋದಿಯವರನ್ನು ಭಾರತದ ಪ್ರಧಾನಿಯನ್ನಾಗಿಸುವ ಸಲುವಾಗಿ ನಿದ್ರಿಸ್ತ ಜನತೆಯನ್ನು ಜಾಗೃತಗೊಳಿಸುವ ಸಲುವಾಗಿ ಸಮಾನ ಮನಸ್ಕರು ಒಂದುಗೂಡಿ ಆರಂಭಿಸಿದ “ನಮೋ ಬ್ರಿಗೇಡ್” ಸಂಘಟನೆಯ ಅಧಿಕೃತ ಉದ್ಘಾಟನೆ. ಕಾರ್ಯಕ್ರಮ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿ ದೀಪ ಬೆಳಗಿಸುವುದರೊಂದಿಗೆ ಹಾಗೂ ಶ್ರೀಯುತ ಅವಿನಾಶ್ ಭಟ್ ಅವರ ಸುಸ್ವರ ವಂದೇ ಮಾತರಂ ಗಾಯನದೊಂದಿಗೆ ಆರಂಭಗೊಂಡಿತು. ಶ್ರೀ ವಸಂತ ಕಿಣಿ ಹಾಗೂ ಕುಮಾರಿ ಸುಷ್ಮಿತಾ ಅವರು ನಿರೂಪಣೆಗೈದ ಈ ಅಪರೂಪದ ಕಾರ್ಯಕ್ರಮದಲ್ಲಿ ” ನಮೋ ಬ್ರಿಗೇಡ್” ವೆಬ್ ಸೈಟ್(www.namobrigade.in) ಅನ್ನು ಉದ್ಘಾಟಿಸುತ್ತಾ ಮುಖ್ಯ ಅತಿಥಿಯಾಗಿದ್ದ ಯೂತ್ ಫಾರ್ ನೇಶನ್ನಿನ ರಾಷ್ಟ್ರೀಯ ಅಧ್ಯಕ್ಷ ಶ್ರೀ ಪಿ.ಪಿ.ಹೆಗ್ಡೆಯವರು ಭಾರತದ ಸಧ್ಯದ ದುಸ್ಥಿತಿಯನ್ನು ವಿವರಿಸುತ್ತಾ ನರೇಂದ್ರ ಮೋದಿಯಂತಹ ನಾಯಕನ ಅವಶ್ಯಕತೆಯನ್ನು ಭಾರತ ವಿಶ್ವಗುರುವಾಗಬೇಕಾದರೆ ನರೇಂದ್ರ ಮೋದಿಯೇ ಯಾಕೆ ಪ್ರಧಾನಿ ಆಗಬೇಕೆಂದು ಮನಮುಟ್ಟುವಂತೆ ವಿವರಿಸಿದರು. ಇನ್ನೋರ್ವ ಅತಿಥಿ ಶ್ರೀ ತೇಜಸ್ವಿಯವರು “ನಮೋ ಬ್ರಿಗೇಡ್ ಮಿಸ್ಡ್ ಕಾಲ್ ಅಲರ್ಟ್” ಅನ್ನು ಉದ್ಘಾಟಿಸಿ ನರೇಂದ್ರ ಮೋದಿಯವರು ಗುಜರಾತಿನಲ್ಲಿ ಮಾಡಿದ ಸಾಧನೆಯನ್ನು ಕಳೆದ ೬೫ ವರ್ಷಗಳಲ್ಲಿ ದೇಶವನ್ನಾಳಿದ ಸರಕಾರಗಳ ದುರಾಡಳಿತದೊಂದಿಗೆ ತುಲನೆ ಮಾಡುತ್ತಾ ಮೋದಿ ಪ್ರಧಾನಿ ಪಟ್ಟಕ್ಕೆ ಯಾಕೆ ಅರ್ಹ ಎಂದು ಸೋದಾಹರಣವಾಗಿ ವಿವರಿಸಿದರು. ಮಾತ್ರವಲ್ಲ ನಮೋ ಬ್ರಿಗೇಡ್ ಮುಂದೆ ಜನರನ್ನು ಹೇಗೆ ಸಂಘಟಿಸಬೇಕು ಹಾಗೂ ಹೇಗೆ ಸಾಮಾನ್ಯ ಜನತೆಯ ಮನ ಮನೆಯನ್ನು ತಲುಪಬೇಕು ಎನ್ನುವುದರ ಬಗ್ಗೆ ವಿಶದವಾಗಿ ತಿಳಿಸಿದರು. (ನಮೋ ಬ್ರಿಗೇಡ್”ಸದಸ್ಯರಾಗಲು ಇಚ್ಛಿಸುವವರು 08067166886 ಗೆ ಒಂದು ತಪ್ಪಿದ ಕರೆ ನೀಡಿದರೆ ಸಾಕು) ಶ್ರೀಮತಿ ಶಕುಂತಲಾ ಅಯ್ಯರ್ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಸಂಘಟಕರ ನಿರೀಕ್ಷೆಗೂ ಮೀರಿ ನೆರೆದಿದ್ದ ಸುಮಾರು ಮುನ್ನೂರಕ್ಕು ಹೆಚ್ಚಿನ ಜನಸ್ತೋಮ ಬಾರಿ ಬಾರಿಗೂ “ನಮೋ ನಮೋ” ಘೋಷಣೆ ಕೂಗುತ್ತಿದ್ದುದು ಕಾರ್ಯಕ್ರಮಕ್ಕೊಂದು ಶೋಭೆ ತಂದಿತ್ತು.