To Join Mission Narendra Modi For PM, Please give a miss call to - 080 - 67166886

ದೇಶದೆಲ್ಲೆಡೆ ಮೋದಿ ಪರ ಅಲೆ : ಚಕ್ರವರ್ತಿ ಸೂಲಿಬೆಲೆ

Bharat NaMo 2

Bharat NaMo 1

ಮಂಗಳೂರು: ಭಾರತವನ್ನು ಅತ್ಯಂತ ಶಕ್ತಿಶಾಲಿ ರಾಷ್ಟ್ರವನ್ನಾಗಿ ರೂಪಿಸುವ ಸದವಕಾಶ ಇದೀಗ ದೊರಕಿದೆ. ತಮ್ಮ ಜನಪರ ಕಾರ್ಯಕ್ರಮಗಳಿಂದ ಗುಜರಾತ್‌ನಲ್ಲಿ ಅಭಿವೃದ್ಧಿಯ ಕ್ರಾಂತಿಯೆಬ್ಬಿಸಿದ ನರೇಂದ್ರ ಮೋದಿಯೇ ಮುಂದಿನ ಪ್ರಧಾನಿಯಾಗಬೇಕೆಂಬ ಕೂಗು ಕೇಳಿಬರುತ್ತಿದ್ದು ಇದನ್ನು ದೇಶದ ಪ್ರತಿಯೊಬ್ಬರೂ ಸಾಕಾರಗೊಳಿಸಬೇಕು ಎಂದು ಪ್ರಖರ ವಾಗ್ಮಿ ಜಾಗೋ ಭಾರತ್ ಖ್ಯಾತಿಯ ಚಕ್ರವರ್ತಿ ಸೂಲಿಬೆಲೆ ಕರೆ ನೀಡಿದ್ದಾರೆ.ನಮೋ ಬ್ರಿಗೇಡ್ ವತಿಯಿಂದ ಶುಕ್ರವಾರ ನಗರದ ವಿಠೋಭ ದೇವಸ್ಥಾನ ರಸ್ತೆಯಲಿರುವ ಶ್ರೀಕೃಷ್ಣ ಮಂದಿರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಡ ಕುಟುಂಬದಲ್ಲಿ ಹುಟ್ಟಿದ ಮೋದಿಯವರಿಗೆ ಈ ದೇಶದ ಬಡವರ ನಿಜವಾದ ನೋವಿನ ಅರಿವಿದೆ. ಅವರಿಂದ ಮಾತ್ರ ಈ ದೇಶದ ಬಡಜನರ ಕಣ್ಣೀರು ಒರೆಸಲು ಸಾಧ್ಯ. ಜನತೆ ಹೊಸ ಬದಲಾವಣೆಗೆ ಅವಕಾಶ ಕಲ್ಪಿಸುವ ಮೂಲಕ ಮೋದಿಯವರೊಂದಿಗೆ ಸುಂದರ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.

ಬ್ರಿಟಿಷರು ಭಾರತ ಬಿಟ್ಟು ತೆರಳಿದಾಗ ಈ ದೇಶ ವಿಭಜನೆಯೂ ಆಯಿತು. ಓಟ್ ಬ್ಯಾಂಕ್‌ಗಾಗಿ ಹಪಹಪಿಸಿದ ಕಾಂಗ್ರೆಸ್ ದೇಶದ ಹಿಂದೂ ಮತ್ತು ಮುಸ್ಲಿಂರೊಂದಿಗಿದ್ದ ಸಾಮರಸ್ಯವನ್ನೂ ಹಾಳುಗೆಡಹಿತು. ಇದೀಗ ರಾಜ್ಯ ವಿಭಜನೆ ಮಾಡಿ ಒಳಜಗಳ ಹೆಚ್ಚಾಗಲು ಕಾಂಗ್ರೆಸ್ ದಾರಿ ಮಾಡಿಕೊಟ್ಟಿದೆ ಎಂದು ಅವರು ಬೊಟ್ಟು ಮಾಡಿದರು.

2002ರ ಚುನಾವಣೆ ಬಳಿಕ ಮೋದಿಯವರಿಗೆ ಗೆಲವು ಅಸಾಧ್ಯ ಎಂದು ಭಾವಿಸಿದ್ದ ಕಾಂಗ್ರೆಸ್‌ಗೆ ಅಲ್ಲಿನ ಜನತೆಯೇ ತಕ್ಕ ಉತ್ತರ ನೀಡಿದ್ದಾರೆ. ತಮ್ಮ ಅಭಿವೃದ್ಧಿ ಕಾರ್ಯಗಳ ಮೂಲಕವೇ ಟೀಕಾಕಾರರಿಗೆ ತಕ್ಕ ಉತ್ತರ ನೀಡಿದ ಮೋದಿ ಇಂದು ರಾಷ್ಟ್ರ ನಾಯಕರಾಗಿ ಮಿಂಚಿದ್ದು ಪ್ರಧಾನಿಯಾಗುವ ಹಾದಿಯಲ್ಲಿದ್ದಾರೆ ಎಂದರು.