To Join Mission Narendra Modi For PM, Please give a miss call to - 080 - 67166886

ಅಕ್ಟೋಬರ್ 27 ರಂದು ಮಂಗಳೂರಿನಲ್ಲಿ ನಮೋ ಭಾರತ್

Bharath NaMo-1

ಮೊಟ್ಟಮೊದಲ ಬಾರಿಗೆ ಮಂಗಳೂರಿನಲ್ಲಿ “ನಮೋ ಭಾರತ್” – ಚಕ್ರವರ್ತಿ ಸೂಲಿಬೆಲೆ ಸಾರಥ್ಯದಲ್ಲಿ…

12 ವರ್ಷಗಳ ಗುಜರಾತ್ ಸರ್ಕಾರ ಸಾಧನೆಯ ಗಾಥೆ ಅಕ್ಟೋಬರ್ 27ರ ರವಿವಾರ, ಸಂಜೆ 6ರಿಂದ 9ರ ತನಕ, ಕೇಂದ್ರ ಮೈದಾನ,ಮಂಗಳೂರು.

ಎಲ್ಲಾ  ನಮೋಬ್ರಿಗೇಡ್ ಘಟಕದ ಸದಸ್ಯರು ಬೈಕ್ ರ್ಯಾಲಿಯ ಮುಖಾಂತರ ಬಂದು ಕಾರ್ಯಕ್ರಮ ಸ್ಥಳಕ್ಕೆ ತಲುಪಬೇಕಾಗಿ ವಿನಂತಿ.

ಭಾರತ-ಪುರಾತನದಿಂದಲೂ ಪಾಶ್ಚಾತ್ಯರಿಗೆ ಕೌತುಕದ ಪದ. ಆ ಮೂರಕ್ಷರದೊಳಗೇನು ಮೋಡಿಯೋ? ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ, ಸೌರಾಷ್ಟ್ರದಿಂದ ಬ್ರಹ್ಮದೇಶದವರೆಗಿನ ಕೌತುಕವನ್ನು ಅರಿಯುವ ಪ್ರಯತ್ನವನ್ನು ಹಲವರು ಮಾಡುತ್ತಲೇ ಬಂದಿದ್ದಾರೆ. ವಿಕ್ರಮಾದಿತ್ಯ-ರಾಣಾಪ್ರತಾಪ-ಪೃಥ್ವಿರಾಜ-ಶಿವಾಜಿ-ಕೃಷ್ಣದೇವರಾಯ ಮೊದಲಾದವರ ಕ್ಷಾತ್ರತೇಜ. ಶಂಕರ-ರಾಮಾನುಜ-ನಿಂಬಾರ್ಕ-ಮಾಧ್ವ-ಬಸವ ನಾರಾಯಣಗುರು-ನಾನಕರ-ತತ್ತ್ವ ಸಂದೇಶ ವೇದಗಳ ಸಾರ, ಪುರಾಣಗಳ ಗುಂಗು, ಸಂತ-ಮಹಂತರ ಅವಧೂತ ಗುಣ ಭಿನ್ನತೆಯಲ್ಲಿ ಕಾಣುವ ಏಕತೆ. ರಾಜ್ಯ ಹಲವಾದರೂ ಬೆಸೆಯುವ ಸೂತ್ರ ಒಂದೇ. ಹೀಗೆ ಅದ್ಭುತವಾಗಿಯೇ ಕಾಣುವ ಭಾರತ ತರ್ಕಕ್ಕೆ ನಿಲುಕದ ಭಾರತ ಎಂದೂ ತಣಿಯದ ಕೌತುಕ. ದಿ. ಶ್ರೀ ವಿದ್ಯಾನಂದ ಶೆಣೈ ಅವರು ಇಂಥ ಭಾರತದ ದರ್ಶನವನ್ನು ನಾಡಿನಾದ್ಯಂತ ಮಾಡಿಸಿದ್ದರು. ಕಾಲಾನಂತರ ಆ ಪರಂಪರೆಯನ್ನು ಶ್ರೀಯುತ ಚಕ್ರವರ್ತಿ ಸೂಲಿಬೆಲೆಯವರು ಮುಂದುವರಿಸಿದರು. ಅಲ್ಲೂ ಕೌತುಕದ್ದೇ ವರ್ಣನೆಗಳು: ಪುರಾತನ-ಆಧುನಿಕದ ಸಮ್ಮಿಳನ-ಬತ್ತಿದ ಸರಸ್ವತಿ, ಉಕ್ಕುವ ಉತ್ಸಾಹದ ಗಂಗೆ, ಉರಿಯುವ ಕಾಶ್ಮೀರ, ಹಾರುವ ಉಪಗ್ರಹಗಳು, ಕಪ್ಪುಹಣ, ಕುಸಿದ ಮೌಲ್ಯ, ಅಮರ ಜವಾನರು, ಮಾತೃಭೂಮಿ, ಅಮರರಾಗುವ ಮಕ್ಕಳು, ಹುತಾತ್ಮ ಅಣ್ಣಂದಿರ ವೀರಗಾಥೆಗಳು, ದನಗಾಹೀ ಬಾಲಕರೂ ರಾಷ್ಟ್ರರಥ ಚಾಲಕರಾದ ಕಥೆಗಳು, ಹಾಗಾಗಿ ಎಲ್ಲರೂ “ಜಾಗೋ ಭಾರತ್, ಜಾಗೋ ಭಾರತ್” ಎಂದರು. “ಜಾಗೋ” ಎಂದ ಚಕ್ರವರ್ತಿ ಸೂಲಿಬೆಲೆಯವರಿಂದ ಇದೀಗ “ನಮೋ” ಮಂತ್ರ. ಬೆಲೆ ಏರಿಕೆಯ ಬಿಸಿ, ಹಗರಣಗಳ ಸರಮಾಲೆ, ಧರ್ಮ ಘ್ಲಾನಿ, ಕ್ಷಾತ್ರ ಹೀನ ಸಂಸ್ಕ್ರತಿ ಮೇರೆ ಮೀರುತ್ತಿರುವಾಗ,ಇಂದು “ನಮೋ” ಎನ್ನದಿದ್ದರೆ ಇನ್ನೆಂದಿಗೂ, ಯಾರಿಗೂ “ನಮೋ” ಎನ್ನಲಾಗದು. ಇದು ಕೇವಲ ಎಚ್ಚರಿಕೆಯಲ್ಲ, ಪಂಥಾಹ್ವಾನ ಕೂಡ. ಚಕ್ರವರ್ತಿ ಸೂಲಿಬೆಲೆಯವರ ವಿನೂತನ ಕಾರ್ಯಕ್ರಮ “ನಮೋ ಭಾರತ್” ಮೊಟ್ಟಮೊದಲ ಬಾರಿಗೆ ಮಂಗಳೂರಿನಲ್ಲಿ.

2 Responses to “ಅಕ್ಟೋಬರ್ 27 ರಂದು ಮಂಗಳೂರಿನಲ್ಲಿ ನಮೋ ಭಾರತ್”

  1. Prashanth bhat says:

    is modi bhai coming??

  2. Raghavendra says:

    Best of Luck

Leave a Reply