To Join Mission Narendra Modi For PM, Please give a miss call to - 080 - 67166886

ನಮೋ ಬ್ರಿಗೇಡ ವಿಜಯಪೂರ (ಬಿಜಾಪೂರ) ಘಟಕದ ಉದ್ಘಾಟನೆ ಸಮಾರಂಭ

DSC_0387

DSC_0088

DSC_0412

ಇತ್ತಿಚಿಗೆ ವಿಜಯಪೂರ ಮಹಾನಗರದಲ್ಲಿ ನಮೋ ಬ್ರಿಗೇಡ ವಿಜಯಪೂರ (ಬಿಜಾಪೂರ) ಘಟಕದ ಉದ್ಘಾಟನೆ ಸಮಾರಂಭ ಜರುಗಿತು. ಅಗಸ್ಟ೨೫ ಭಾನುವಾರ ಸಂಜೆ ೬ ಘಂಟೆಗೆ ಪ್ರಾರಂಭವಾದ ಅತ್ಯದ್ಭುತ ಸಮಾರಂಭದಲ್ಲಿ ನಾಲ್ವರು ಅಥಿಥಿಗಳು ವೇದಿಕೆ ಹಂಚಿಕೊಂಡಿದ್ದರು. ಈ ಸಮಾರಂಭದಲ್ಲಿ ಕಿಕ್ಕಿರಿದು ಸೆರಿದ್ದ ಜನಸ್ತೋಮವನ್ನು ಉದ್ದೆಶಿಸಿ ಮಾತನಾಡಿದ ಪಿ ಪಿ ಹೆಗ್ದೆಯವರು (Vice-President, Bar council of India), ನಮ್ಮ ದೇಶಕ್ಕೆ ನರೆಂದ್ರ ಮೋದಿ ಅವರು ಯಾಕೆ ಅತ್ಯವಶ್ಯ  ಮತ್ತು ಅವರು ಹೇಗೆ ಬದಲಾವಣೆ ತರಬಲ್ಲರು ಎಂಬ ಬಗ್ಗೆ ಅತ್ಯಂತ ವಿಸ್ತ್ರುತವಾಗಿ ಹಾಗು ಉದಾಹರಣೆ ಸಹಿತವಾಗಿ ವಿವರಿಸಿದರು. ನಿಕೇತ ರಾಜ್ (volunteer of Bharat Swabhiman Trust) ಅವರು, ಭಾರತಕ್ಕೆ ಅತ್ಯಂತ ಶಕ್ತಿಶಾಲಿ ನಾಯಕನ ಅವಶ್ಯಕತೆ ಬಗ್ಗೆ ಹಾಗು ನರೇಂದ್ರ ಮೋದಿಯವರ ವ್ಯಕ್ತಿತ್ವ ಮತ್ತು ಅವರ ಬಲಾಡ್ಯತೆ ಬಗ್ಗೆ ಜನರಿಗೆ ಅತ್ಯಂತ ಸುಂದರವಾಗಿ ವಿವರಿಸಿದರು. ಕಿರಣ ನಡಕಟ್ಟಿ (Lecturer) ಅವರು, ದೇಶಭಕ್ತಿಯ ಹಾಗು ಪ್ರತಿಯೊಬ್ಬರಿಗು ದೇಶದ ಬಗ್ಗೆ ಇರುವ ಅಭಿಮಾನದ ಬಗ್ಗೆ ಕೆಲವೇ ಮಾತುಗಳಲ್ಲಿ ತಿಳಿಸಿದರು. ಅಶೋಕ ಒಸ್ವಾಲ (businessman) ಅವರು, ತಮ್ಮ ಶಾಯರಿಗಳ ಮುಲಕ ಜನರ ಮನಸ್ಸು ಗೆಲ್ಲೊ ಪ್ರಯತ್ನಮಾಡಿ ಅಷ್ತೆ ಚೆನ್ನಾಗಿ ಮಾತನಾಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ ನಾಲ್ವರು ಅಥಿಥಿಗಳು ದೇಶ ಮತ್ತು ಮೋದಿಯವರ ಗುಜರಾತ ಮೊಡಿ ಬಗ್ಗೆ ಹೆಳುವ ಪ್ರಯತ್ನ ಮಾಡಿ ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲ ನಮೋ ಬ್ರಿಗೇಡ ವಿಜಯಪೂರ (ಬಿಜಾಪೂರ) ಘಟಕದ ಸ್ವಸಹಾಯಕರಿಗೆ ಕಾರ್ಯಕ್ರಮ ಯಶಸ್ವಿಯಾದ ಸಂತೋಷ ಹಾಗು ಆಗಮಿಸಿದ ಎಲ್ಲ ಮೋದಿ ಅಭಿಮಾನಿ ಬಂಧುಗಳಿಗೆ ಭಾರತ ಬದಲಾವಣೆಯ ಪರ್ವ ಶುರುವಾದ ಖುಷಿ. ಒಟ್ನಲ್ಲಿ ಯುವಕರ ಈ ಕಾರ್ಯವು ವಿಜಯಪೂರಿನ ಹಿರಿಯರ ಮನಸ್ಸು ಗೆದ್ದಿತ್ತು ಅಂತ ಹೆಳಿದರೆ ತಪ್ಪಾಗಲಾರದು.

ಹ್ಯಾಟ್ಸ ಅಪ್ ಟೂ ಯುಥ್ಸ್…!!

ಈ ಕಾರ್ಯ ಕ್ರಮಕ್ಕು ಮುಂಚೆ ಅಂದರೆ ಅಗಸ್ಟ೨೪ ಬೆಳಿಗ್ಗೆ ಬೃಹತ್ ರ್‍ಯಾಲಿ ಜರುಗಿತು. ಮೋದಿ ಭಾವಚಿತ್ರದೊಂದಿಗೆ ಸುಮಾರು ೨೦೦ ಕ್ಕೂ ಹೆಚ್ಚು ಯುವಕರು ಸ್ವ ಪ್ರೆರಣೆಯಿಂದ ಬೈಕುಗಳನ್ನು ಓಡಿಸಿ ಜನರಲ್ಲಿ ಘೊಷಣೆಗಳನ್ನು ಕೂಗುತ್ತಾ ಜನರಲ್ಲಿ ಭಾರತ ಬದಲಾವಣೆಯ ಗಾಳಿ ಬಿಸುವುದರ ಸುಳಿವು ನೀಡಿದರು. ಮೋದಿಯವರ ಮೋಡಿ ವಿಜಯಪೂರ ನಗರವನ್ನು ಸಂಪೂರ್ಣವಾಗಿ ಆವರಿಸಿತ್ತು. ಮೋದಿ ಅವರ ಬೆನ್ನಿಗೆ ನಾವಿದ್ದೇವೆ ಅಂತಾ ಅವರುಗಳ ಮುಗ್ದ ಮನಸ್ಸು ಸಾರಿ ಹೆಳ್ತಾ ಇತ್ತು.

– ಭರತ್ ಕವಿ