To Join Mission Narendra Modi For PM, Please give a miss call to - 080 - 67166886

ಮೋದಿ ಮೋಡಿಗೊಳಗಾದ ಜಮಖಂಡಿಯ ಜನ

NaMo Brigade Jamakhandi

ದಿನಾಂಕ 30-07-2013, ಮಂಗಳವಾರದಂದು ಬೆಳಿಗ್ಗೆಯಿಂದಲೇ ಜಮಖಂಡಿಯಲ್ಲಿ ಜನ ಕಿಕ್ಕಿರಿದು ಸೇರಲು ಪ್ರಾರಂಭಿಸಿದ್ದರು,ಕಾರಣ ಅವತ್ತು ನಮೋ ಬ್ರೀಗೇಡನ ಬಾಗಲಕೋಟ ಶಾಖೆಯ ಪ್ರಾರಂಭದ ದಿನ.ಒಂದೆಡೆ ನಗರದ ತುಂಬೆಲ್ಲಾ ನರೇಂದ್ರ ಮೋದಿಯವರ ಪ್ಲೆಕ್ಸಗಳು ರಾರಾಜಿಸುತ್ತಿದ್ದರೆ ಇನ್ನೊಂದೆಡೆ ಜಮಖಂಡಿಯ ಯುವಕರ ಮೋಟಾರ ವಾಹನಗಳನ್ನು ನರೇಂದ್ರ ಮೋದಿಯವರ ಭಾವಚಿತ್ರಗಳು ಆವರಿಸಿಕೊಂಡಿದ್ದವು.ಭಗವಾ ದ್ವಜಗಳ ಹಾರಾಟದ ಸದ್ದು ನಗರದ ತುಂಬೆಲ್ಲಾ ಕೇಳಿಸುತ್ತಿತ್ತು.ಅವತ್ತು ಜನರ ಬಾಯಲ್ಲಿ ಒಂದೇ ಮಾತು ಅದು “ಮೋದಿ ಮೋಡಿ ದಿಲ್ಲಿಯಿಂದ ಹಳ್ಳಿಯವರೆಗೂ ಅವರಿಸಿದೆ ಎನ್ನುತ್ತಿದ್ದರು”.ಸರಿಯಾಗಿ ಮದ್ಯಾಹ್ನ 2 ಘಂಟೆಗೆ ಜಮಖಂಡಿಯ ದೇಸಾಯಿ ಸರ್ಕಲದಿಂದ ಪ್ರಾರಂಭವಾದ ಮೊಟಾರ ವಾಹನಗಳ ರ್ಯಾಲಿ ನಗರದ ದಿಕ್ಕು ದಿಕ್ಕುಗಳಿಂದ ಸದ್ದು ಮಾಡುತ್ತಾ,ಕಾರ್ಯಕ್ರಮ ನಡೆಯುವ  ಸ್ಥಳವಾದ ಎ.ಪಿ.ಎಂ.ಸಿ. ಮಂಗಲ ಕಾಯರ್ಾಲಯಕ್ಕೆ 3 ಘಂಟೆಗೆ ಬಂದು ತಲುಪಿತು.
ನಂತರ ಸರಿಯಾಗಿ 4 ಘಂಟೆಗೆ ಕಾರ್ಯಕ್ರಮ ತಾಯಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮುಖಾಂತರ ಪ್ರಾರಂಭವಾಯಿತು.   ಕಾರ್ಯಕ್ರಮದ ಅಧ್ಯéಕ್ಷತೆಯನ್ನು ಜಮಖಂಡಿಯ ಖ್ಯಾತ ನ್ಯಾಯವಾದಿಗಳಾದಂತ ಶ್ರೀಯುತ ಸಿ.ಎಸ್.ಬಾಂಗಿಯವರು ವಹಿಸಿದ್ದರು.ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ಜಾಗೋ ಭಾರತ ಖ್ಯಾತಿಯ ಶ್ರೀ ಚಕ್ರವತರ್ಿ ಸೂಲಿಬೆಲೆ ಮತ್ತು ಶ್ರೀ ತೇಜಸ್ವಿ ಸೂರ್ಯರವರು ಆಗಮಿಸಿದ್ದರು.ಮೊದಲಿಗೆ ನಮೋ ಬ್ರೀಗೇಡ್ ಕಾರ್ಯಕರ್ತರಾದ ಶ್ರೀ ಹನಮಂತರಾಯ.ಬಿರಾದಾರ ಮತ್ತು ವಿದ್ಯಾಧರ ಸವದಿಯವರು ಕಾರ್ಯಕ್ರಮವನ್ನುದ್ದೇಶಿಸಿ ಪ್ರಾಸ್ತಾವಿಕವಾಗಿ ಭಾಷಣ ಮಾಡಿದರು.ನಂತರ ಯುವ ಭಾಷಣಕಾರ ತೇಜಸ್ವಿಯವರು ನೆರೆದಿದ್ದ ಜನತೆಗೆ ನರೇಂದ್ರ ಮೋದಿಯವರ ಸಾಧನೆಗಳನ್ನು ಏಳೆ ಏಳೆಯಾಗಿ ಬಿಡಿಸಿಟ್ಟರು.ನಂತರ ಶ್ರೀ ಸಿ.ಎಸ್.ಬಾಂಗಿಯವರು ಮಾತನಾಡಿ ದೇಶದ ಸಮಸ್ಯಗಳು ಇತ್ಯರ್ತವಾಗಬೇಕಾದರೇ ನರೇಂದ್ರ ಮೋದಿಯವರು ಪ್ರಧಾನಿಯಾದಾಗ ಮಾತ್ರ ಸಾಧ್ಯ ಎಂದರು.ಕೊನೆಗೆ ಕಾರ್ಯಕ್ರಮದ ಸಾರಥ್ಯ ವಹಿಸಿದ್ದ ಶ್ರೀ ಚಕ್ರವತರ್ಿ ಸೂಲಿಬೆಲೆಯವರು ಮೋದಿ ಮೋಡಿಯನ್ನು ಜನರಿಗೆ ಮನ ಮುಟ್ಟುವಂತೆ ಹೇಳಿದರು.ಮೋದಿ ಎಂಬ ಗುಮ್ಮ ದೇಶದ್ರೋಹಿಗಳನ್ನು ನಿದ್ದೆಗೆಡುವಂತೆ ಮಾಡಿದೆ ಎಂದರು.ಕಾರ್ಯಕ್ರಮವು ವಂದೇ ಮಾತರಂ ಗೀತೆ ಹಾಡುವ ಮುಖಾಂತರ ಮುಕ್ತಾಯವಯಿತು.ಈ ಕಾರ್ಯಕ್ರಮಕ್ಕೆ ಸುಮಾರು 6ಸಾವಿರಕ್ಕೂ ಅಧಿಕ ಪ್ರೇಕ್ಷಕರು ಪಾಲ್ಗೊಂಡು ಕಾರ್ಯಕ್ರಮದ  ಯಶಸ್ಸಿಗೆ ಕಾರಣಿಕರ್ತರಾದರು.ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ಆಪ್ಟೆಯವರು ವಹಿಸಿದ್ದರು ಇವರಿಗೆ ಬೆನ್ನೆಲುಬಾಗಿ ಪ್ರತೀಕ.ಕುಮಟೆಯವರು ಮತ್ತು ನಮೋ ಬ್ರೀಗೇಡ್ನ ನೂರಾರು ಕಾರ್ಯಕರ್ತರು ಕೇಲಸ ನಿರ್ವಹಿಸಿದ್ದರು.

ವಂದೇ ಮಾತರಂ