To Join Mission Narendra Modi For PM, Please give a miss call to - 080 - 67166886

ನನ್ನ ದೇಶ ‘ಮೋಧಿಫೈ’ ಆಗಬೇಕು. ಏಕೆಂದರೆ?

namo-brigade-jamakhandi-chapter-launch-event-part-2

ಎಂ. ನರೇಶ್ ಶೆಣೈ, ನಮೋಬ್ರಿಗೇಡ್, ಮಂಗಳೂರು

ಕೆಲವರ್ಷಗಳ ಹಿಂದೆ ದೇಶದ ಯುವ ಜನಾಂಗ ಅಣ್ಣಾ ಹಜಾರೆಯ ಹಿಂದೆ ಬಿದ್ದ ಘಟನೆಯನ್ನು ಒಮ್ಮೆ ನೆನಪು ಮಾಡಿಕೊಳ್ಳೋಣ. ಹಾಗೆಯೇ ಅಷ್ಟೇ ಬೇಗ ಅಣ್ಣಾ ಚಳವಳಿ ತನ್ನ ಮೊನಚು ಕಳೆದುಕೊಂಡಿದ್ದು, ಯುವ ಜನರ ಉತ್ಸಹದ ಬುಗ್ಗೆ ಸೋಡಾ ಪುಗ್ಗೆಯತೆ ಒಮ್ಮೆಲೆ ಒಡೆದಿದ್ದನ್ನೂ ನೆನಪು ಮಾಡಿಕೊಳ್ಳೋಣ. ಇವೆಲ್ಲಾ ಏಕೆ ಹಾಗಾಯಿತು?
ಬಹುಶಃ ಸ್ವಾತಂತ್ರ್ಯಾನಂತರ ಮೊಟ್ಟ ಮೊದಲ ಬಾರಿಗೆ ದೇಶದ ಯುವ ಜನಾಂಗ ದೇಶಕ್ಕಾಗಿ ಬೀದಿಗಿಳಿದಿತ್ತು. ಯುವಕರ ಆಕ್ರೋಶ, ಯುವಕರ ಬೇಗುದಿಯನ್ನು ಅಣ್ಣಾ ಎಂಬ ವಯೋವೃದ್ಧ  ಹೊರಗೆಳೆದಿದ್ದ. ಅಥವಾ ಯುವಕರು ಅದುವರೆಗೆ ಎಲ್ಲರಲ್ಲೂ ಭರವಸೆಯನ್ನು ಕಳೆದುಕೊಂಡಿದ್ದರು. ಅಂಥ ಹೊತ್ತಲ್ಲಿ ಆಶಾವಾದದಂತೆ ಅಣ್ಣಾ ಕಂಡುಬಂದಿದ್ದರು. ಆದರೂ ಕೆಲವೇ ದಿನಗಳಲ್ಲಿ ಅಣ್ಣಾ ಹಜಾರೆಯೂ ಅವರ ಚಳವಳಿಯೂ ಮೂಲೆಗುಂಪಾಯಿತು. ತನ್ನನ್ನು ಹೆಣೆಯಲು ಬಂದ ಕಾಂಗ್ರೆಸಿನ ಕುತ್ಸಿತತನ ತಂತ್ರದ ಎದುರು ದೇಶಾದ್ಯಂತ ಎದ್ದ ಚಳವಳಿಯೇ ಮಂಡಿಯೂರಿ ಮಲಗಿ ಗಂಟುಮೂಟೆ ಕಟ್ಟಿತು.
ಇದಕ್ಕೆ ಪಂಥಗಳ ಹಂಗಿಲ್ಲದೆ ಕಾರಣಗಳನ್ನು ಹುಡುಕಿದರೆ ಕಾಣುವುದು ಪ್ರಮುಖವಾಗಿ ಎರಡು ಸಂಗತಿಗಳು. ಒಂದು ಕಾಂಗ್ರೆಸಿನ ಚಳವಳಿಗಳನ್ನು ಹಣಿಯುವ ತಂತ್ರಕ್ಕೆ ಸಮರ್ಥವಾಗಿ ಎದುರು ನಿಲ್ಲಬಲ್ಲ, ಅದನ್ನು ಎದುರಿಸಬಲ್ಲ ಶಕ್ತಿ ಅಣ್ಣಾ ಹಜಾರೆ ಮತ್ತು ಅವರ ತಂಡಕ್ಕೆ ಇಲ್ಲದೇ ಇದ್ದುದು. ಎರಡನೆಯದು ಅಣ್ಣಾ ಮುರಿದ ಪಾಳು ಮನೆಯನ್ನು ತೋರಿಸಿದ್ದರೇ ಹೊರತು, ಹೊಸದನ್ನು ಎಲ್ಲಿ ಕಟ್ಟೋಣ, ಹೇಗೆ ಕಟ್ಟೋಣ ಎಂದು ಹೇಳಿರಲಿಲ್ಲ. ಅಥವಾ ಅವರಿಗದು ಗೊತ್ತೇ ಇರಲಿಲ್ಲ. ದೇಶಾದ್ಯಂತ ಯುವಕರು ಅಣ್ಣಾ ಕಟ್ಟುವರೇನೋ ಎಂದು ಅವರ ಹಿಂದೆ ಬಿದ್ದಿದ್ದರೇ ಹೊರತು ಮುರಿದ ಸಂಗತಿಗಳ ಬಗ್ಗೆ ಅವರು ಅಜ್ಞಾನಿಗಳಾಗಿರಲಿಲ್ಲ .
ಈ ಉತ್ತರಗಳು ಕೇವಲ ಒಂದು ಚಳವಳಿಯ ವೈಫಲ್ಯವನ್ನು ಹೇಳುವುದರ ಜೊತೆಗೆ ಹೊಸ ಪ್ರಶ್ನೆಯೊಂದಕ್ಕೆ ಉತ್ತರವನ್ನೂ ತಿಳಿಸುವಂತಿದೆ. ಅದೇ  ದಿನದಿಂದ ದಿನಕ್ಕೆ ನರೇಂದ್ರ ಮೋದಿ ಜನಪ್ರೀಯತೆ ಏಕೆ ಹೆಚ್ಚಾಗುತ್ತಿದೆ ಎಂಬ ಪ್ರಶ್ನೆ. ಅವರ ಜನಪ್ರೀಯತೆ ಎಷ್ಟೊಂದು ಹೆಚ್ಚುತ್ತಿದೆಯೆಂದರೆ ಇಂದು ದೇಶಕ್ಕೆ ನರೇಂದ್ರ ಮೋದಿ ಅನಿವಾರ್ಯವೆಂದು ಸಮಸ್ತ ನವಪೀಳಿಗೆ ಭಾವಿಸುವಷ್ಟು. ಇಂದಿನ ಆಧುನಿಕ ಪೀಳಿಗೆಯೇನೂ ಸಾಕಷ್ಟು ಅನುಭವಸ್ತರಲ್ಲ. ಅವರಿನ್ನೂ ಹಿರಿಯರಂತೆ ಕಾಂಗ್ರೆಸಿನಿಂದ ಸಾಕಷ್ಟು ಅನುಭವಿಸಿದವರಲ್ಲ. ಅದಕ್ಕೂ ಹೆಚ್ಚಾಗಿ  ಅವರಿನ್ನೂ ವೋಟು ಹಾಕಿದವರೇ ಅಲ್ಲ. ಅವರು ಇದೀಗಷ್ಟೇ ಜಗತ್ತನ್ನು ನೋಡುತ್ತಿರುವವರು. ಅಪ್ಪಟ ಆಧುನಿಕ ಎಂದು ಹೇಳಬಹುದಾದ ಅವರಿಗೆ ಸರಿಯೆನಿಸುವಂತೆ ದೇಶ ಇಲ್ಲ. ದೇಶವಿಲ್ಲ ಅಷ್ಟೇ ಅಲ್ಲ ಉಳಿದವರ ಮುಂದೆ ಈಗಿರುವ ಸ್ಥಿತಿ ಸ್ವಾಭಿಮಾನಿ ಯುವ ಪೀಳಿಗೆಗೆ ತಲೆತಗ್ಗಿಸುವಂತೆ ಇದೆ. ಸದ್ಯ ಯುವಜನರಲ್ಲಿ ಹುಟ್ಟುತ್ತಿರುವುದು ಅಂಥ ಆಕ್ರೋಶ. ವ್ಯವಸ್ಥೆಯ ಬಗ್ಗೆಗಿನ ಈ ಆಕ್ರೋಶಕ್ಕೂ ಒಂದು ಅರ್ಥವಿದೆ. ಅಂಥ ದೇಶವನ್ನು ರಕ್ಷಿಸಲು `ನಮೋ’ ಮಂತ್ರವೊಂದೇ ಉತ್ತರ ಎಂಬುದು ಅವರ ಅರಿವಿಗೂ ಬಂದಿರುವ ಸತ್ಯ. ಅದು ಕೇವಲ ಬಿಸಿರಕ್ತದವರ ಭ್ರಮಾಧೀನ ಮನಸ್ಥಿತಿಯಲ್ಲ, ಭಾಷಣದಿಂದ ಉಂಟಾದ  ಮೋಡಿಯೂ ಅಲ್ಲ, ಹುಚ್ಚು ಮನಸ್ಥಿತಿಯಿಂದ ತೆಗೆದುಕೊಂಡ ನಿಧರ್ಾರವೂ ಅಲ್ಲ. ಅವರದ್ದು ಅಪ್ಪಟ ವೈಚಾರಿಕವಾದ, ಕಾಳಜಿಪರವಾದ, ದೇಶಭಕ್ತಿತನದ ನಿಧರ್ಾರ. ಅದರ ಪ್ರಕಟೀಕರಣವೇ `ನಮೋನಿಯಾ’. ದೇಶದ ಮೂಲೆಮೂಲೆಗಳಲ್ಲೂ ಮೋದಿ ಮೋಡಿ ಉಂಟಾಗುತ್ತಿರುವುದೇ ಅದಕ್ಕೆ ಸಾಕ್ಷಿಯೂ ಹೌದು. ಒಂದು ವೇಳೆ ಯುವಜನಾಂಗದ ಮೋದಿ ಜಪ ಅವರ ವಯಸ್ಸಿನ ನಿಧರ್ಾರವೇ ಆಗಿದ್ದರೆ ಅವರೆಲ್ಲರೂ ಏಕಪ್ರಕಾರವಾಗಿ ಮೋದಿಯನ್ನೇ ಏಕೆ ಅನುಮೋದಿಸುತ್ತಿದ್ದರು? ರಂಜಕವಾದ, ರೋಷವನ್ನು ಉಕ್ಕಿಸುವ ಕಮ್ಯುನಿಷ್ಟ್ ಭಾಷಣಕಾರರ ಹಿಂದೇಕೆ ಬೀಳಲಿಲ್ಲ?
ಮೋದಿಯ ಮೋಡಿಗೆ ಬೀಳದಿರುವುದಾದರೂ ಹೇಗೆ ಸಾಧ್ಯ?
ಆಧುನಿಕ, ವಿದ್ಯಾವಂತ ಪೀಳಿಗೆ ಸದಾ ಜಾಗತಿಕ ವಿದ್ಯಮಾನಗಳನ್ನು ಕುತೂಹಲದಿಂದ ಗಮನಿಸುತ್ತರುತ್ತವೆ. ಅವರಿಗೆ ಅಮೆರಿಕಾದ ಪೊಗರುತನ ಇಷ್ಟವಾಗಿವೆ, ಇಸ್ರೇಲಿನ ಕೆಚ್ಚು ಮನಸ್ಸಿಗೆ ನಾಟಿದೆ,  ಜಪಾನಿನ ಪ್ರಗತಿ ಬೆರಗು ಮೂಡಿಸಿದೆ. ಅದರ ಜೊತೆಜೊತೆಗೇ ಗಡಿ ರೇಖೆಯನ್ನು ಆಗಾಗ್ಗೆ  ಉಲ್ಲಂಘಿಸುವ ಚೀನಾ, ಹಾಗೆಬಂದು ಹೀಗೆ ಹೋಗುವಾಗ ನಮ್ಮ ಸೈನಕರ ತಲೆಗಳನ್ನು ಆಗಾಗ್ಗೆ  ಕತ್ತರಿಸಿ ಕೊಂಡೊಯ್ಯುವ ಪಾಕಿಸ್ಥಾನಿ ಸೈನಿಕರ ಉಪಟಳ, ಅದರತ್ತ ಲಕ್ಷ್ಯವನ್ನೇ ಕೊಡದ ನಮ್ಮ ಆಡಳಿತಗಳು, ಅತ್ತ ಯುರೋಪಿನಲ್ಲೆಲ್ಲೋ ಒಲಂಪಿಕ್ ಕೂಡ ನಾಚುವಂಥ ಕ್ರೀಡಾಕೂಟಗಳು ನಡೆಯುತ್ತಿರುವಾಗ ಇಲ್ಲಿ ಹಗರಣಗಳ ಸರಮಾಲೆಗಳನ್ನೇ ನೋಡಬೇಕಾದ ಅನಿವಾರ್ಯತೆಗಳು ಯಾರಲ್ಲಿ ತಾನೇ ಆಕ್ರೋಶವನ್ನು ಹುಟ್ಟಿಸದೇ ಇರಲಾರದು?  ಇಂಥ ಘಟನೆಗಳು ಆಕ್ರೋಶ ಹುಟ್ಟಿಸದೇ ಇದ್ದರೆ ಆತ ನಿಜಕ್ಕೂ ದೇಶದ್ರೋಹಿಯೆಂದೇ ಅರ್ಥ ಎಂಬುದನ್ನು ತಿಳಿಯಲಾದಷ್ಟು ಆಧುನಿಕ ಪೀಳಿಗೆ ಮೂಡವಲ್ಲ. ಅಂಥ ಮೂಡರಲ್ಲದ ಜನರ ನಾಯಕ ನಮ್ಮ ಈ ನರೇಂದ್ರ ಮೋದಿಯವರು. ದೇಶದ ಯುವಪೀಳಿಗೆಯ ಮೇಲೆ ಇಂದು ನಾವು ಎಷ್ಟೊಂದು ಭರವಸೆಯನ್ನು ಇಡಬಹುದೆಂದರೆ  ಸ್ವಾತಂತ್ರ್ಯಾನಂತರದ ಎಲ್ಲಾ ಪೀಳಿಗೆಗಳಿಗಿಂತಲೂ ಹೆಚ್ಚಿನ ವಿಶ್ವಾಸವನ್ನು ಇಡಬಹುದು ಎನಿಸುತ್ತದೆ. ಏಕೆಂದರೆ ಇವರಷ್ಟು ಸೂಕ್ಷ್ಮ ಗ್ರಾಹಿಗಳು ಮೊದಲೆಂದೂ ಹುಟ್ಟಿರಲಿಲ್ಲವೆಂದೇ ಹೇಳಬೇಕಾಗಿದೆ. ಅವರೆಷ್ಟು ಸೂಕ್ಷ್ಮ ಗ್ರಾಹಿಗಳೆಂದರೆ ದೇಶದ ಮೂಲೆಯ ಒಂದು ರಾಜ್ಯವನ್ನು ಗುರುತಿಸಿದವರು. ಗುರುತಿಸಿ ಸಮಸ್ತ ಭಾರತವೇ ಅದರಂತಾಗಬೇಕೆಂದು ಭಾವಿಸಿರುವವರು. ಗುಜರಾತ್ ದೇಶದ ಮೂವತ್ತು ರಾಜ್ಯಗಳಲ್ಲಿ ಒಂದು ರಾಜ್ಯವಷ್ಟೆ. ನಮ್ಮ ಕನರ್ಾಟಕ, ಆಂದ್ರ, ತಮಿಳುನಾಡಿಗಿಂತ ಅದ್ಭುತವಾಗಿರುವಂಥದ್ದೇನೂ ಗುಜರಾತಿನಲ್ಲಿಲ್ಲ. ಆದರೂ ಇಂದು ಗುಜರಾತ್ ಉಳಿದ ರಾಜ್ಯಗಳಂತಿಲ್ಲ. ಉಳಿದ ರಾಜ್ಯಗಳಿಗೆ ಗುಜರಾತನ್ನು ಹೋಲಿಸುವಂತಿಲ್ಲ.
ಕೆಲವು ಉದಾಹರಣೆಗಳನ್ನೇ ನೋಡಿ.
ಅಪರೂಪದ ಏಷ್ಯಾಟಿಕ್ ಸಿಂಹಗಳು ಕೇವಲ ಗುಜರಾತಿನಲ್ಲಿ ಕಾಣಸಿಗುತ್ತವೆ. ಮೋದಿ ಆ ಸಿಂಹಗಳ ಬಗ್ಗೆ ಎಷ್ಟೊಂದು ಕಾಳಜಿ ವಹಿಸುತ್ತಾರೆಂದರೆ ಗೀರ್ನ ಪ್ರತೀ ಸಿಂಹಗಳ ಮಾಹಿತಿ ಅವರ ಬಳಿಯಿರುತ್ತದೆ. ಒಮ್ಮೆ ಗೀರ್ನ ಅಂಚಿನ ಒಂದು ಹಳ್ಳಿಯಲ್ಲಿ ಸಿಂಹಿಣಿಯೊಂದು ಮರಿ ಹಾಕಿದ ಸುದ್ದಿ ಬಂದು. ಆ ಸಿಂಹಿಣಿ ಆದಾಗ ತಾನೇ ಕೊಯ್ಲಿಗೆ ಬಂದಿದ್ದ ಹೊಸದಲ್ಲಿ ಮರಿ ಹಾಕಿತ್ತು. ಇದನ್ನು ತಿಳಿದ ತಕ್ಷಣ ಮುಖ್ಯಮಂತ್ರಿ ಕಛೇರಿಯಿಂದ ವಿಶೇಷ ಆದೇಶವೊಂದು ರವಾನೆಯಾಯಿತು. ಆ ಸಿಂಹಗಳು ಅಲ್ಲಿರುವಷ್ಟು ದಿನ ಆ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಯಿತು ಮತ್ತು ಆ ಜಮೀನಿನ ಮಾಲಿಕ ರೈತನಿಗೆ ಅವನ ಉತ್ಪನ್ನಕ್ಕಿಂತ ಮೂರು ಪಟ್ಟು ಪರಿಹಾರವನ್ನು ನೀಡಲಾಯಿತು.  ಈ ಒಂದು ಪ್ರಕರಣದಿಂದಲೇ ಆಡಳಿತ ಯಂತ್ರವನ್ನು ಅಳೆಯಬಹುದು ಮತ್ತು ಉಳಿದ ರಾಜ್ಯಗಳ ಆಡಳಿತಗಾರರ ಆಡಳಿತ ಸಂವೇದನೆಯನ್ನು ತುಲನೆಯೂ ಮಾಡಬಹುದು.
ಇಂದು ಗುಜರಾತ್ ಕೇವಲ ಕರೆಂಟಿನಿಂದ, ಸೋಲಾರಿನಿಂದ, ಕೃಷಿಯಿಂದ, ಧೋಲೆರಾ ನಗರ ನಿಮರ್ಾಣದಿಂದ, ಹಾಲು-ತರಕಾರಿಗಳ ಉತ್ಪನ್ನಗಳಿಂದ ಮಾತ್ರ ವಿಶ್ವಮಟ್ಟದಲ್ಲಿ ಸುದ್ದಿಯಾಗುತ್ತಿಲ್ಲ. ಇಂದು ಗುಜರಾತ್ ವಿಶ್ವದ ಖ್ಯಾತ ಅರ್ಥಶಾಸ್ತ್ರಜ್ನರ ಅಧ್ಯಯನಕ್ಕೆ ವಸ್ತು ಕೂಡಾ ಆಗಿದೆ. ಒಂದೆಡೆ ಸಮಾಜವಾದ ಎಂಬ ನಂಟು. ಇನ್ನೊಂದೆಡೆ ಪಾಶ್ಚಾತ್ಯ ಮಾಧರಿಯ ಭ್ರಮೆಗಳೆರಡನ್ನೂ ಕಳಚುವ ಮಾಧರಿಯನ್ನು ಮೋದಿ ತೋರಿಸಿಕೊಟ್ಟಿದ್ದಾರೆ. ಮೋದಿ ಮಾತ್ರ ತೋರಿಸಿಕೊಟ್ಟಿದ್ದಾರೆ.
ಬಹುಶಃ ದೇಶದ ಜನತೆಗೆ ನರೇಂದ್ರ ಮೋದಿಯವರ ಈ ಕೆಳಗಿನ ಸಾಧನೆಗಳು `ಗೋಧ್ರಾ’ ದಷ್ಟು ಕಿವಿಗೆ ಬಿದ್ದಿರಲಿಕ್ಕಿಲ್ಲ.
2005, 2006, 2007ರಲ್ಲಿ ಸತತವಾಗಿ ಅತ್ಯತ್ತಮ ಮುಖ್ಯಮಂತ್ರಿ ಪ್ರಶಸ್ತಿ, 2004ರಲ್ಲಿ ನ್ಯಾಶನಲ್ ಪ್ರೋಡೆಕ್ಟಿವಿಟೀ ಅವಾಡರ್್, 2006ರಲ್ಲಿ ಅತ್ಯತ್ತಮ ಆಡಳಿತಕ್ಕಾಗಿ ಕೊಡಮಾಡಲಾಗುವ ಪ್ರಧಾನ ಮಂತ್ರಿಗಳ ಪ್ರಶಸ್ತಿ, 2006ರಲ್ಲಿ ರಾಜೀವ್ ಗಾಂಧಿ ವೈಲ್ಡ್ಲೈಫ್ ಕನ್ಸರ್ವೇಟಿವ್ ಅವಾಡರ್್, 2006ರಲ್ಲಿ ಅತ್ಯತ್ತಮ ಇ-ಆಡಳಿತಕ್ಕಾಗಿ ಮೈಕ್ರೋಸಾಫ್ಟ್ ಪ್ರಶಸ್ತಿ, 2007ರಲ್ಲಿ ಇ-ಆಡಳಿತಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ, 2007ರಲ್ಲಿ ಇಂಧನ ಮರುಬಳಕೆಗಾಗಿ ನೀಡಲಾಗುವ ರಾಷ್ಟ್ರೀಯ ಪ್ರಶಸ್ತಿ, 2007ರಲ್ಲಿ ಕರಾವಳಿ ನಿರ್ವಹಣೆಗಾಗಿ ನೀಡಲಾಗುವ ರಾಷ್ಟ್ರೀಯ ಪ್ರಶಸ್ತಿ, 2007ರಲ್ಲಿ ಅತ್ಯುತ್ತಮ ಜೈವಿಕ ರಾಜ್ಯ ಪ್ರಶಸ್ತಿ, 2007ರಲ್ಲಿ `ಟೆರಿ’ ಪ್ರಶಸ್ತಿ, 2008ರಲ್ಲಿ ಇಂಡಿಯಾ ಪವರ್ ಅವಾಡರ್್, 2008ರಲ್ಲಿ ಅತ್ಯುತ್ತಮ ಗಾಳಿ ಶಕ್ತಿ ಅಭಿವೃದ್ಧಿ ಪ್ರಶಸ್ತಿ, 2008ರಲ್ಲಿ ಐ.ಟಿ ಬಳಕೆದಾರ ಪ್ರಶಸ್ತಿ, 2008ರಲ್ಲಿ ಏಕಒಉ ಟಿಜಿಡಿಚಿಣಡಿಣಛಿಣಣಡಿಜ ಖಿಠಜಚಿಥಿ ಪ್ರಶಸ್ತಿ, 2008ರಲ್ಲಿ ಅತ್ಯುತ್ತಮ ಗ್ರಾಮೀಣ ಬಸ್ ಸಾರಿಗೆ ಅಭಿವೃದ್ಧಿ ಪ್ರಶಸ್ತಿ, 2008ರಲ್ಲಿ ನಿರ್ಮಲ್ ಗ್ರಾಮ್ ಪುರಷ್ಕಾರ್. ವಿಚಿತ್ರವೆಂದರೆ ಈ ಎಲ್ಲಾ ಪ್ರಶಸ್ತಿಗಳನ್ನೂ ಮೋದಿಯವರು ತಮ್ಮನ್ನು ಸದಾ ತೆಗಳುವವರ ಕೈಯಿಂದಲೇ ಪಡೆದುಕೊಂಡು ಮುಗುಳುನಕ್ಕರು. ಮೋದಿ ಬಂದ ಮೇಲೆ ಗುಜರಾತ್ `ಮೋಡಿಫೈ’ ಆಯಿತು ಎಂಬುದಕ್ಕೆ ಇದಕ್ಕಿಂತ ಹೆಚ್ಚಿನ ಸಾಕ್ಷಿಗಳು ಇನ್ನೇನು ಬೇಕಿದೆ? ಹಾಗಾದರೆ ಭಾರತ `ಮೋಡಿಫೈ’ ಆಗಲು ಮೋದಿಯತ್ತ ಯಾಕೆ ಭರವಸೆ ಇಡಬಾರದು? ಕೆಲ ವರ್ಷಗಳ ಹಿಂದೆ ಗೆಳೆಯರೊಬ್ಬರು “ ಮೋದಿ ಮೇಜಿನ ಮೇಲೆ ಭೃಹತ್ತಾದ ಬಿಸ್ಮಾರ್ಕನ ಪುಸ್ತಕವಿತ್ತೆಂದು ಹೇಳಿದ್ದರು. ಸ್ವಾಥಂತ್ರ್ಯ ಪೂರ್ವದಲ್ಲಿ ಸಾವರ್ಕರ್ ಓದುತ್ತಿದ್ದ ಬಿಸ್ಮಾಕರ್್, ಭಗತ್ ಸಿಂಗ್ ಓದುತ್ತಿದ್ದ ಬಿಸ್ಮಾಕರ್್, ಮದನ್ ಲಾಲ್ ಧಿಂಗ್ರಾ ಓದುತ್ತಿದ್ದ ಬಿಸ್ಮಾಕರ್್ ಅನ್ನು ನಮೋ ಕೂಡಾ ಓದುತ್ತಿರುವುದು ಅಚ್ಚರಿಯಲ್ಲ ಎನ್ನಿಸಿತ್ತು. ಅಂಥವರು ಮಾತ್ರ ನಮ್ಮ ಸದ್ಯದ ಪರಿಸ್ಥಿತಿಯಲ್ಲಿ ನಮ್ಮನ್ನು ಮೇಲೆತ್ತಬಲ್ಲರು. ದೇಶವನ್ನು `ಮೋಡಿಫೈ’ ಮಾಡಬಲ್ಲರು. ಹಾಗಾಗಿ ನಾವು ಅನು`ಮೋದಿ’ಸಬೇಕು ಎನ್ನಿಸಿತ್ತು. ಭಾರತದ ಪುರಾತನ ಪರಂಪರೆಯ ಆಧುನಿಕ ಅವತಾರಕ್ಕೆ   `ನಮೋನಮಃ’ ಎನ್ನದೆ ಇನ್ನಾರಿಗೆ ಅನ್ನೋಣ?